ಕ್ರೀಡೆ

ಕ್ರೀಡೆಗಳು ಈ ಶತಮಾನದ ಅತ್ಯಂತ ಆಕರ್ಷಕ ಚಟುವಟಿಕೆಗಳಾಗಿವೆ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಉನ್ನತ ಮಟ್ಟವನ್ನು ತಲುಪಲು ಕ್ರೀಡೆಗಳು ಪ್ರಮುಖವಾಗಿವೆ, ಆದ್ದರಿಂದ ಕ್ರಿಡಾ ಕ್ಷೇತ್ರವು ಒಂದು ಬೃಹತ್ ಉದ್ಯಮವಾಗಿ ಮಾರ್ಪಡಾಗಿದೆ. ಈ ಉದ್ಯಮದ ಪಾಲುದಾರರಾಗಿ ಕ್ರೀಡಾ ತರಬೇತುದಾರರು, ಕ್ರೀಡಾ ಮನೋವಿಜ್ಞಾನಿಗಳು, ಕ್ರೀಡಾ ಶಿಕ್ಷಕರುಗಳು, ಕ್ರೀಡಾ ಆಡಳಿತಾಗಾರರು, ಕ್ರೀಡಾ ಅಧಿಕಾರಿಗಳು, ಕ್ರೀಡಾ ವರಧಿಗಾರರು ಹಾಗೂ ವಿಶ್ವವಿದ್ಯಾನಿಲಯದ ವಿವಿಧ ಪ್ರತಿಭಾನ್ವಿತ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಇತರೆ ವರ್ಗಗಳ ಕ್ರೀಡಾ ಸಲಹಾ ಸಮಿತಿಯನ್ನು ರಚಿಸಿಕೊಂಡು ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುವುದು.

ವಿಶ್ವವಿದ್ಯಾನಿಲಯದ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗಾಗಿ, ಅಂತರ ಕಾಲೇಜು ಪಂದ್ಯಾವಳಿ ಮತ್ತು ವಿಶ್ವವಿದ್ಯಾನಿಲಯ ತಂಡದ ಆಯ್ಕೆಯನ್ನು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ಆಶ್ರಯದಲ್ಲಿ ಸಂಘಟನೆ ಮಾಡಿ, ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ತಂಡವನ್ನು ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳಿಗೆ ಭಾಗವಹಿಸಲು ಕಳುಹಿಸಲಾಗುವುದು.

ಪಕ್ಷಿ ನೋಟ:

ದೈಹಿಕ ಶಿಕ್ಷಣ ಮತ್ತು ಮನರಂಜನಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ, ಸಹಭಾಗಿತ್ವ, ಕ್ಷೇಮ, ಮತ್ತು ಸ್ಥಿತಿ ಸ್ಥಾಪಕತ್ವದ ಮಹತ್ವ ಏನು ಎಂಬುದರ ಅನುಭವ ಹಾಗೂ ರೂಪಾಂತರದ ಬದಾಲಾವಣೆಯನ್ನು ಕ್ರೀಡೆಯು ಉಂಟುಮಾಡುತ್ತದೆ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬೇಕಾದ ಬುದ್ದಿಶಕ್ತಿ, ನೈತಿಕತೆಯನ್ನು ಅಭಿವೃದ್ದಿಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ, ಸಿಬ್ಬಂದಿ ಮತ್ತು ಭೋಧನಾ ವರ್ಗದವರಿಗೆ ಅವಕಾಶ ನೀಡಿದಂತಾಗುತ್ತದೆ ಹಾಗೂ ಸಮಾಜದಲ್ಲಿ ಪ್ರಭಾವ ಬೀರುವಂತಹ ಮಾರ್ಗಗಳನ್ನು ಅಥೈಸುತ್ತದೆ.

ದೃಷ್ಠಿ ಕೋನ:

ಕ್ರೀಡೆಗಳು ನಾಯಕರು, ಮಾರ್ಗದರ್ಶಕರು & ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯ ಮೌಲ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಹಾಗೂ ಕ್ರೀಡಾ ಚಟುವಟಿಕೆಯ ಸಮತೋಲನ ಮತ್ತು ಶ್ರೇಷ್ಠತೆಯ ಜೀವನವನ್ನು ತಿಳಿದುಕೊಳ್ಳಲು ಕ್ರೀಡೆಗಳು ಪ್ರೇರೇಪಿಸುತ್ತವೆ.

ವಿವಿಧ ಪಾತ್ರಗಳನ್ನು ನಿರ್ಮಿಸುವ ಧೃಡವಾದ ಮತ್ತು ವೈವಿಧ್ಯಮಯವಾದ ಅವಕಾಶಗಳನ್ನು ನೀಡಲು ಕ್ರೀಡೆಗಳು ಪ್ರೇರಣೆ ನೀಡುತ್ತವೆ, ನಮ್ಮ ಜೀವನದ ಎಲ್ಲಾ ಅಂಶಗಳನ್ನು ಯಶಸ್ವಿಯಾಗಲು ಕ್ರೀಡಾ ಮಾರ್ಗದರ್ಶಕರು, ಚಿಂತಕರು, ಕ್ರೀಡಾ ನಿರ್ದೇಶಕರುಗಳು ಅವಕಾಶ ಕಲ್ಪಿಸಿಕೊಡುತ್ತಾರೆ.

 

ಸಿಬ್ಬಂದಿ ವರ್ಗದ ವಿವರ:

ಕ್ರ.ಸಂ ಸಿಬ್ಬಂದಿ ವರ್ಗದವರ ಹೆಸರು ಪದನಾಮ ವಿದ್ಯಾರ್ಹತೆ.
01 ಶ್ರೀ.ಎಂ.ಎಸ್. ರಾಜ್‍ಕುಮಾರ್. ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರು ಎಂ.ಪಿ.ಇಡಿ. ಎಂ.ಪಿಲ್. (ಪಿ.ಹೆಚ್.ಡಿ)