ಉಪಕುಲಪತಿ ಸಂದೇಶ

Dr. Sharanappa V. Halse M.Sc, M.Phil, Ph. D, E.D.P & CM Hon'ble Vice Chancellor

ನೂತನ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ವಿಶೇಷಾಧಿಕಾರಿಯಾಗಿ ಮತ್ತು ಪ್ರಥಮ ಕುಲಪತಿಯಾಗಿ ಪ್ರೊ|| ಇಂದುಮತಿ ಮಾದಯ್ಯ ದಿನಾಂಕಃ03.09.2009 ರಿಂದ 02.09.2013 ವರೆಗೆ ಕಾರ್ಯನಿರ್ವಹಿಸಿದ್ದಾರೆ. ತದನಂತರ, ಎರಡನೆ ಕುಲಪತಿಯಾಗಿ ಪ್ರೊ|| ಬಿ.ಬಿ. ಕಲಿವಾಳರವರು ದಿನಾಂಕಃ 30.12.2013ರಿಂದ 29.12.2017ರವರೆಗೆ ಕಾರ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಪ್ರೊ|| ಶರಣಪ್ಪ ವೈಜಿನಾಥ ಹಲಸೆಯವರು (ಪ್ರೊ|| ಎಸ್.ವಿ. ಹಲಸೆಯವರು) ಈ ವಿಶ್ವವಿದ್ಯಾನಿಲಯದ ಮೂರನೆಯ ಕುಲಪತಿಯಾಗಿ ದಿನಾಂಕಃ26.03.2018 ರಂದು ಅಧಿಕಾರ ಸ್ಪೀಕರಿಸಿರುತ್ತಾರೆ. ಇದಕ್ಕೂ ಪೂರ್ವದಲ್ಲಿ ಪ್ರೊ|| ಎಸ್.ವಿ. ಹಲಸೆಯವರು ದಿನಾಂಕಃ04.02.2017ರಿಂದ ದಿನಾಂಕಃ25.03.2018ರವರೆಗೆ ಇದೇ ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ/ ಸಂಶೋಧನೆಗೆ ಅತ್ಯಾವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಸೃಜಿಸುವ ಉದ್ದೇಶವನ್ನು ಪ್ರಸ್ತುತದ ಕುಲಪತಿಗಳು ಹೊಂದಿರುತ್ತಾರೆ.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ದೇಶದ ಸಮಗ್ರ; ಮಾನವೀಯ ಮತ್ತು ಜನ ಜೀವನದ ಅಭಿವೃದ್ಧಿಗಾಗಿ ಸರ್ವ ರೀತಿಯ ಪ್ರಯತ್ನ ಮಾಡುವ ಬಗ್ಗೆ ಉತ್ತೇಜನ ನೀಡುವ ಉದ್ದೇಶವನ್ನು ವಿಶ್ವವಿದ್ಯಾನಿಲಯ ಹೊಂದಿದೆ. ಅಲ್ಲದೆ, ಉನ್ನತ ಶಿಕ್ಷಣದ ಗುಣಮಟ್ಟವನ್ನು ಉನ್ನತೀಕರಿಸುವಲ್ಲಿ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸಲು ರೂಪುರೇಷೆಗಳನ್ನು ಸಿದ್ಧಪಡಿಸುವ ಅಂತರ್ಗತ ವಿಧಾನಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಯುವ ಪೀಳಿಗೆಯ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಒಗ್ಗೂಡಿಸುವ ಸಲುವಾಗಿ ಅವಶ್ಯವಿರುವ ಯುವಶಕ್ತಿಯನ್ನು ಬಲಪಡಿಸಲಾಗುತ್ತಿದೆ. ಅಲ್ಲದೆ, ಯುವ ಶಕ್ತಿಯ ಮೂಲಕ ಸಮಾಜದ ಅಥವಾ ಸಾಮಾಜಿಕ ತತ್ವಗಳನ್ನು ರಾಷ್ಟದ ಐಕ್ಯತೆ ಮತ್ತು ಅಭಿವೃದ್ಧಿಗಾಗಿ - ಗ್ರಾಮಾಂತರ, ಪ್ರಾಂತೀಯ ಮತ್ತು ದೇಶದಾಂತ್ಯದ ಮಟ್ಟದಲ್ಲಿ ಜಾಗೃತಗೊಳಿಸುವ ದಿಶೆಯಲ್ಲಿ ವಿಶ್ವವಿದ್ಯಾನಿಲಯದ ಬೋಧಕರು ಶ್ರಮಿಸುತ್ತಿದ್ದಾರೆ.