ಎಸ್‍ಸಿ / ಎಸ್‍ಟಿ ಕೋಶ

ದಾವಣಗೆರೆ ವಿಶ್ವವಿದ್ಯಾನಿಲಯವು ದಿನಾಂಕ:18-08-2009ರಿಂದ ಕುವೆಂಪು ವಿಶ್ವವಿದ್ಯಾನಿಲಯದಿಂದ ಪ್ರತ್ಯೇಕವಾಗಿ ಅಸ್ತಿತ್ವ ಹೊಂದಿ ತನ್ನ ಕಾರ್ಯ ಆರಂಭಿಸಿತು. ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಿದ್ಯಾರ್ಥಿ ಅಭಿವೃದ್ಧಿ ಘಟಕವನ್ನು 2010ರ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಯಿತು. ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ, ಮತ್ತು ಸಂಶೋಧನಾರ್ಥಿಗಳಿಗೆ ಶೈಕ್ಷಣಿಕ, ಸಾಮಾಜಿಕ ಸೌಲಭ್ಯಗಳನ್ನು ಪರಿಚಯಿಸುವುದು, ಸಹಾಯ ಕಲ್ಪಿಸುವುದು, ಅವರಿಗಿರುವ ವಿವಿಧ ಯೋಜನೆಗಳನ್ನು ವಿಶ್ವವಿಧ್ಯಾನಿಲಯದಿಂದ ಅನುಷ್ಠಾನಕ್ಕೆ ತರುವುದು ಘಟಕದ ಮುಖ್ಯ ಉದ್ದೇಶವಾಗಿದೆ. ಆರ್ಥಿಕ ಸೌಲಭ್ಯಗಳ ಜೊತೆಗೆ, ಕೌಶಲ್ಯ ತರಭೇತಿ, ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸುವುದು, ಸಮ್ಮೇಳನಗಳನ್ನು ಆಯೋಜಿಸುವುದು, ಉನ್ನತೀಕರಣ, ಶೈಕ್ಷಣಿಕ ಪ್ರವಾಸಕ್ಕೆ ಧನಸಹಾಯ, ಕ್ಷೇತ್ರಕಾರ್ಯಕ್ಕೆ ಧನ ಸಹಾಯ, ಸಂಶೋಧನಾರ್ಥಿಗಳಿಗೆ ಶಿಷ್ಯವೇತನ ಪಾವತಿಸುವುದು, ಪರಿಶಿಷ್ಠರ ಗ್ರಂಥಾಲಯಗಳಿಗೆ ಪುಸ್ತಕ ಹಾಗೂ ಪೀಠೋಪಕರಣಗಳನ್ನು ಖರೀದಿಸುವುದು, ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳ ಇ.ಬಿ.ಎಲ್. ಹಾಗೂ ಪಾವತಿಸುವುದು, ಇತರೆ ಕಾರ್ಯಕ್ರಮಗಳು ಘಟಕದ ಮುಖ್ಯ ಧ್ಯೇಯ ಮತ್ತು ಉದ್ದೇಶಗಳಾಗಿವೆ.

 

2018-19ನೇ ಶೈಕ್ಷಣಿಕ ಸಾಲಿನಲ್ಲಿ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವಿವರಗಳು:-

 

 1. ದಿನಾಂಕ:5-4-2018ರಂದು ಬಾಬು ಜಗಜೀವನರಾಂರವರ 111ನೇ ಜಯಂತಿ ಹಾಗೂ ದಿನಾಂಕ: 14-4-2018ರಂದು ಡಾ|| ಬಿ.ಆರ್. ಅಂಬೇಡ್ಕರ್‍ರವರ 127ನೇ ಜಯಂತೋತ್ಸವವನ್ನು ಘಟಕದಲ್ಲಿ ಆಚರಿಸಲಾಯಿತು. ಪ್ರೊ.ಎಸ್.ವಿ.ಹಲಸೆ, ಮಾನ್ಯ ಕುಲಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಡಾ.ಲಕ್ಷ್ಮಣ.ಪಿ. ಮಾನ್ಯ ಕುಲಸಚಿವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 2. ದಿನಾಂಕ:24-10-2018ರಂದು ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಘಟಕದಲ್ಲಿ ಆಚರಿಸಲಾಯಿತು. ಪ್ರೊ.ಪಿ. ಕಣ್ಣನ್. ಮಾನ್ಯ ಕುಲಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 3. ದಿನಾಂಕ: 26-11-2018ರಂದು ಭಾರತೀಯ ಸಂವಿಧಾನ ದಿನಾಚರಣೆಯನ್ನು ಘಟಕದಲ್ಲಿ ಆಚರಿಸಲಾಯಿತು.
 4. ದಿನಾಂಕ:6-12-2018ರಂದು ಡಾ.ಬಿ.ಆರ್. ಅಂಬೇಡ್ಕರ್‍ರವರ ಪರಿನಿರ್ವಾಣ ದಿವಸವನ್ನು ಘಟಕದಲ್ಲಿ ಆಚರಿಸಲಾಯಿತು ಹಾಗೂ ಭಾರತ ಸಂವಿಧಾನ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ. ಎಸ್.ವಿ. ಹಲಸೆ, ಮಾನ್ಯ ಕುಲಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಡಾ.ಹೆಚ್.ವಿಶ್ವನಾಥ್, ಪ್ರಾಧ್ಯಾಪಕರು, ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಮಾನ್ಯ ಕುಲಸಚಿವರಾದ ಪ್ರೊ. ಪಿ. ಕಣ್ಣನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 5. ವಿಶ್ವವಿದ್ಯಾನಿಲಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ 9ಜನ ಸಂಶೋಧನಾರ್ಥಿಗಳಿಗೆ ಹಿರಿಯ ಮತ್ತು ಕಿರಿಯ ಸಂಶೋಧನಾ ಶಿಷ್ಯವೇತನ ಹಾಗೂ ನಿಗದಿ ಪಡಿಸಿದ ವಾರ್ಷಿಕ ಅನುಷಂಗಿಕ ವೆಚ್ಚವನ್ನು ಪಾವತಿಸಲಾಯಿತು.
 6. ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಕ್ಷೇತ್ರಕಾರ್ಯ (Pಡಿoರಿeಛಿಣ Woಡಿಞ) ಕೈಗೊಂಡಿರುವ 287 ಜನ ವಿಧ್ಯಾರ್ಥಿಗಳಿಗೆ ತಲಾ ರೂ.1000ದಂತೆ ಕ್ಷೇತ್ರಕಾರ್ಯ ಸಹಾಯಧನ ವಿತರಿಸಲಾಯಿತು.
 7. ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಪೂರ್ವಾನುಮತಿ ಪಡೆದು ಶೈಕ್ಷಣಿಕ/ ಕೈಗಾರಿಕ ಭೇಟಿ ಕೈಗೊಂಡ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಸಹಾಯಧನ ವಿತರಿಸಲಾಯಿತು.
 8. ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ವಿಶ್ವವಿದ್ಯಾನಿಲಯದ ಪೂರ್ವಾನುಮತಿ ಪಡೆದು ರಾಜ್ಯದ ವಿವಿದೆಡೆ ಆಯೋಜಿಸಿದ್ದ ವಿಚಾರ ಸಂಕಿರಣ, ಸಮ್ಮೇಳನ, ಹಾಗೂ ಕಾರ್ಯಗಾರಗಳು ಹಾಗೂ ಇತರೆ ಕಾರ್ಯಕ್ರಮಗಳಿಗೆ ಹಾಜರಾದರೆ ಅಂತಹವರಿಗೆ ಘಟಕದ ಕ್ರೀಯಾಯೋಜನೆ ಅನ್ವಯ ಉನ್ನತೀಕರಣ ಶೀರ್ಷಿಕೆ ಅಡಿ ಸಹಾಯಧನ ವಿತರಿಸಲಾಯಿತು.
 9. ಪರಿಶಿಷ್ಟಜಾತಿ-ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ವಾಗುವಂತೆ ವಿವಿಧ ಕಾರ್ಯಗಾರಗಳು, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಯಿತು.
 10. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಿದ್ಯಾರ್ಥಿ ಅಭಿವೃದ್ಧಿ ಘಟಕದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸಲು ಶಿಪಾರಸ್ಸು ಮಾಡಲಾಗಿದ್ದು ಕೇಂದ್ರಿಯ ಖರೀದಿ ವಿಭಾಗದ ಹಂತದಲ್ಲಿ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಹಾಗೆಯೇ ಘಟಕಕ್ಕೆ ಪಿಠೋಪಕರಣಗಳನ್ನು ಖರೀದಿಸಲು ಶಿಪಾರಸ್ಸು ಮಾಡಲಾಗಿದ್ದು ಅದು ಕೂಡ ಕೇಂದ್ರಿಯ ಖರೀದಿ ವಿಭಾಗದಲ್ಲಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ.
 11. ಪರಿಶಿಷ್ಠಜಾತಿ-ಪರಿಶಿಷ್ಠ ಪಂಗಡ ವಿಧ್ಯಾರ್ಥಿ ಅಭಿವೃದ್ಧಿ ಘಟಕದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಪ್ರಥಮ ವರ್ಷಕ್ಕೆ-483, ಅಂತಿಮ ವರ್ಷಕ್ಕೆ-299, ಒಟ್ಟು 782 ವಿದ್ಯಾರ್ಥಿಗಳಿರುವರು.

 

 

ಪರಿಶಿಷ್ಟಜಾತಿ-ಪರಿಶಿಷ್ಟ ಪಂಗಡ ವಿದ್ಯಾರ್ಥಿ ಅಭಿವೃದ್ಧಿ ಘಟಕದ ಸಲಹಾ ಸಮಿತಿ ಸದಸ್ಯರ ವಿವರ

 

01 ಪ್ರೊ. ಎಸ್.ವಿ. ಹಲಸೆ, ಮಾನ್ಯ ಕುಲಪತಿಗಳು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಅಧ್ಯಕ್ಷರು

 

02 ಪ್ರೊ. ಪಿ. ಕಣ್ಣನ್, ಮಾನ್ಯ ಕುಲಸಚಿವರು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು

 

03 ಪ್ರೊ. ಜೆ. ಕೆ. ರಾಜು, ಹಣಕಾಸು ಅಧಿಕಾರಿಗಳು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
04 ಶ್ರೀ ಜಯಪ್ರಕಾಶ ಕೊಂಡಜ್ಜಿ, ಸಿಂಡಿಕೇಟ್ ಸದಸ್ಯರು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
05 ಡಾ. ರಾಜೇಶ್ವರಿ ಪೂಜಾರಿ, ಸಹ ಪ್ರಾಧ್ಯಾಪಕರು, ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳಕೆರೆ. ಸದಸ್ಯರು
06 ಪ್ರೊ. ಎನ್. ಎಂ. ನಾಗರಾಜ, ಪ್ರಾಂಶುಪಾಲರು, ಕನ್ನಡ ಅಧ್ಯಯನ ವಿಭಾಗ,                  ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ. ಸದಸ್ಯರು
07 ಡಾ. ಬಿ.ಪಿ. ವೀರಭಧ್ರಪ್ಪ, ಪ್ರಾಧ್ಯಾಪಕರು, ಅರ್ಥಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
08 ಡಾ. ರಾಮಲಿಂಗಪ್ಪ. ಪ್ರಾಧ್ಯಾಪಕರು, ಸೂಕ್ಮಜೀವಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
09 ಉಪ-ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲೆ. ಸದಸ್ಯರು
10 ಡಾ. ಲಕ್ಷ್ಮಣ್. ಪಿ ಸಂಚಾಲಕರು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿ ಅಭಿವೃದ್ಧಿ ಘಟಕ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ಸದಸ್ಯ ಕಾರ್ಯದರ್ಶಿ

ಸಂಚಾಲಕರು

ಡಾ. ಲಕ್ಷ್ಮಣ್. ಪಿ

ಸಂಚಾಲಕರು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿ ಅಭಿವೃದ್ಧಿ ಘಟಕ,
ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ