ಮುಂಪುಟ

ಪ್ರಕಟಣೆಗಳು

ವಿಚಾರ ಸಂಕಿರಣ

ವಿಭಾಗ ಮತ್ತು ಪಠ್ಯಕ್ರಮಗಳು

ಫಲಿತಾಂಶ

ನೇಮಕಾತಿ

ಇ-ವಿಷಯ

ಗ್ರಂಥಾಲಯ

 

ದಾವಣಗೆರೆ ವಿಶ್ವವಿದ್ಯಾಲಕ್ಕೆ ಸುಸ್ವಾಗತ

ಕರ್ನಾಟಕ ಸರ್ಕಾರದ ದಿನಾಂಕ:18.08.2009 ರ ವಿಶೇಷ ಗೆಜೆಟ್ ಅಧಿಸೂಚನೆ ಮೇರೆಗೆ ರಾಜ್ಯದ ಮಧ್ಯ ಭಾಗದಲ್ಲಿರುವ - ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ದಾವಣಗೆರೆ ವಿಶ್ವವಿದ್ಯಾನಿಲಯವು ದಿನಾಂಕ:18.08.2009 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ವಿಶ್ವವಿದ್ಯಾನಿಲಯವು ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದ ಮತ್ತು ರಾಜ್ಯದಲ್ಲಿ ಶೈಕ್ಷಣಿಕವಾಗಿ/ಆರ್ಥಿಕವಾಗಿ ಅತೀ ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗಗಳು/ಅಲ್ಪಸಂಖ್ಯಾತರು ಮತ್ತು ಇನ್ನಿತರ ಉನ್ನತ ಶಿಕ್ಷಣಾಸಕ್ತರ/ಸಂಶೋಧಕರ/ಸಾರ್ವಜನಿಕರ ಹಾಗೂ ಉನ್ನತ ಶಿಕ್ಷಣಾರ್ಥಿಗಳ ಜ್ಞಾನಾರ್ಜನೆ ಮತ್ತು ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರವು ಈ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿರುತ್ತದೆ. ಈ ವಿಶ್ವವಿದ್ಯಾನಿಲಯವು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–04 ಕ್ಕೆ ಹೊಂದಿಕೊಂಡಿದ್ದು, ರಸ್ತೆ ಮತ್ತು ರೈಲ್ವೇ ಪ್ರಯಾಣ ವ್ಯವಸ್ಥೆ ಲಭ್ಯವಿದೆ. ದಾವಣಗೆರೆ ಕೇಂದ್ರದಿಂದ 5 ಕಿ.ಮೀ ಮತ್ತು ರಾಜಧಾನಿ ಬೆಂಗಳೂರು ಕೇಂದ್ರದಿಂದ 260 ಕಿ.ಮೀ ದೂರದಲ್ಲಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯ್ದೆ 1956 ನಿಯಮ 12(ಬಿ) ಮತ್ತು 2(ಎಫ್) ಗಳಡಿ ಹಾಗೂ ಸದರಿ ಕಾಯ್ದೆ ನಿಯಮ 22 ರಡಿ ಮಾನ್ಯತೆ ನೀಡಿರುತ್ತದೆ.