ಜೀವರಸಾಯನಶಾಸ್ತ್ರ

(ಸ್ಥಾಪನೆಯ ವರ್ಷ: 1993-1994)

ಕುವೆಂಪು ವಿಶ್ವವಿದ್ಯಾನಿಲಯವು ಜೀವರಸಾಯನಶಾಸ್ತ್ರ ವಿಭಾಗವನ್ನು ದಾವಣಗೆರೆಯ ಸ್ನಾತಕೋತ್ತರ ಕೇಂದ್ರದಲ್ಲಿ 1993-94ರಲ್ಲಿ ಪ್ರಾರಂಭಿಸಲಾಯಿತು. ಆಗಸ್ಟ್ 18 2009 ರಂದು ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ಜೀವರಸಾಯನಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಅಧ್ಯಯನ, ಜೈವಿಕ ವಿಜ್ಞಾನಗಳ ವಿವಿಧ ವಿಷಯಗಳ (ಕ್ಯಾನ್ಸರ್ ಬಯಾಲಜಿ, ಆಹಾರ ಮತ್ತು ಔಷಧ ನ್ಯಾನೋಟೆಕ್ನಾಲಜಿ, ಸಸ್ಯಜೀವರಸಾಯನಶಾಸ್ತ್ರ ಮತ್ತು ನೈಸರ್ಗಿಕ ಉತ್ಪನ್ನಗಳು ಹಾಗೂ ಬಯೋಡಿಗ್ರಡೇಷನ್, ಬಯೋಟ್ರಾನ್ಸ್‍ಫರ್‍ಮೇಷನ್ ಮತ್ತು ಬಯೋಕ್ಯಾಟಲೈಸಿಸ್) ಬಗ್ಗೆ ಸಂಶೋಧನೆಯಲ್ಲಿ ತೊಡಗಿರುತ್ತದೆ ಹಾಗೂ ಎಂ.ಫಿಲ್. ಮತ್ತು ಪಿ.ಹೆಚ್.ಡಿ. ಪದವಿಗಳನ್ನು ಪಡೆಯುವ ಅವಕಾಶವಿರುತ್ತದೆ.

ಜೀವರಸಾಯನಶಾಸ್ತ್ರದ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸುವಂತಹ ಎಲ್ಲಾ ವಿಷಯಗಳ ಬೊಧನೆ ಮತ್ತು ಕಲಿಕೆಗೆ ಅವಕಾಶವಿರುವ ರೀತಿಯಲ್ಲಿ ತಯಾರಿಸಲಾಗಿದೆ ಹಾಗೂ ವಿದ್ಯಾರ್ಥಿಗಳು ಪ್ರಸ್ತುತ ಬೇಡಿಕೆಯಲ್ಲಿ ಹೊರಹೊಮ್ಮುತ್ತಿರುವ ಜೈವಿಕ ವಿಷಯಗಳ ಶಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಒತ್ತು ನೀಡಲಾಗಿದೆ.

ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಐಸೊಲೇಷನ್ ಮತ್ತು ಪ್ಯೂರಿಫಿಕೇಷನ್‍ಆಫ್ ಬಯೋಮಾಲಿಕ್ಯೂಲ್ಸ್, ಕ್ಲಿನಿಕಲ್ ಬಯೋಕೆಮಿಸ್ಟ್ರಿ, ಮಾಲಿಕ್ಯುಲಾರ್ ಬಯಾಲಜಿ, ಇಮ್ಯೂನಾಲಜಿ ಮತ್ತು ಸೆಲ್ ಸಿಗ್ನಲಿಂಗ್ ಮುಂತಾದ ವಿಷಯಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ವಿಭಾಗದ ಬಹಳಷ್ಟು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷಕೆಗಳಾದ ಜಾಯಿಂಟ್ ಸಿ.ಎಸ್.ಐ.ಆರ್-ಯುಜಿಸಿ/ನೆಟ್, ಐಸಿಎಂಆರ್, ಜೆಆರ್‍ಎಫ್, ಮತ್ತು ಗೇಟ್ ಮುಂತಾದ ಪರೀಕ್ಷೆಗಳಲ್ಲಿ ತೇರ್ಗಡೆಯನ್ನು ಹೊಂದಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ನಡೆಸುತ್ತಿರುವ  ಕೆ-ಸೆಟ್ ಪರೀಕ್ಷೆಯಲ್ಲಿ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ, ವಿಭಾಗಕ್ಕೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರಾಂತ ಸಂಶೋಧನಾ ಸಂಸ್ಥೆಗಳಿಂದ ವಿಜ್ಞಾನಿಗಳನ್ನು ಹಾಗೂ ಜೀವರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿರುವ ಹಲವಾರು ಪ್ರಾಧ್ಯಾಪಕರನ್ನು ವಿಭಾಗಕ್ಕೆ ಆಹ್ವಾನಿಸಿ ಅವರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಮತ್ತು ವಿಚಾರ ಸಂಕೀರಣಗಳನ್ನು ಏರ್ಪಡಿಸಲಾಗಿರುತ್ತದೆ.

ಜೀವರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಬೋಧನಾಕಾರ್ಯದಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಹಾಗೂ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿರುತ್ತವೆ. ವಿಭಾಗದಲ್ಲಿ ಅಧ್ಯಯನ ಮಾಡಿದ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳಾದ ಬಯೋಕಾನ್, ಆಕ್ಸೆಂಚೂರ್, ಸ್ಟ್ರೈಡ್ಸ-ಆಕ್ರೋಲ್ಯಾಬ್ಸ್, ಸಮಿಲ್ಯಾಬ್ಸ್, ನ್ಯಾಚುರಲ್‍ರೆಮೆಡಿಸ್, ಅರಬಿಂದೋ ಫಾರ್ಮ ಬೈಯೋನೀಡ್ಸ್ ಮುಂತಾದ ಸಂಸ್ಥೆಗಳ ಆರ್& ಡಿ, ಕ್ವಾಲಿಟಿಕಂಟ್ರೋಲ್ ವಿಭಾಗಳಲ್ಲಿ ಕಿರಿಯ ವಿಜ್ಞಾನಿಗಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ.  ಕೆಲವು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಕೇಂದ್ರೀಯ ಆಹಾರತಂತ್ರಜ್ಞಾನ ಸಂಸ್ಥೆ, ರಕ್ಷಣಾ ಆಹಾರ ಸಂಶೋಧನ ಪ್ರಯೋಗಶಾಲೆ,   ಮೈಸೂರು ಮುಂತಾದ ಸಂಸ್ಥೆಗಳಲ್ಲಿ ಕಿರಿಯ ಸಂಶೋಧನ ವಿದ್ಯಾರ್ಥಿಗಳಾಗಿ ತಮ್ಮ ಪಿ.ಹೆಚ್.ಡಿ.ಗೋಸ್ಕರ ಸಂಶೋಧನೆಯನ್ನು ಮಾಡುತ್ತಿದ್ದಾರೆ.

ಜೀವರಸಾಯನಶಾಸ್ತ್ರ ವಿಭಾಗದ ಕೆಲವು ಹಳೆಯ ವಿದ್ಯಾರ್ಥಿಗಳು, ಈಗ ರಾಜ್ಯದ ಮಂಗಳೂರು ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ತೋಟಗಾರಿಕೆ ವಿಶ್ವವಿದ್ಯಾನಿಲಯ, ಮುಂತಾದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ವಿಭಾಗದ ಕೆಲವು ಹಳೆಯ ವಿದ್ಯಾರ್ಥಿಗಳು ವಿದೇಶಗಳಲ್ಲಿನ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಲ್ಲಿ ತಮ್ಮ ಪೋಸ್ಟ್-ಡಾಕ್ಟರಲ್ ಸಂಶೋಧನೆಯನ್ನು ಮಾಡುತ್ತಿದ್ದಾರೆ.

ಜೀವರಸಾಯನಶಾಸ್ತ್ರ ಬೋಧಕ ವರ್ಗವು ಬೋಧನೆ ಮತ್ತು ಸಂಶೋಧನೆಯಲ್ಲಿ ನಿರಂತರ ಸಕ್ರಿಯವಾಗಿದೆ. ವಿಭಾಗದ ಬೋಧನಾ ಸಹಾಯಕರ ಸದಸ್ಯರು 150ಕ್ಕಿಂತ ಹೆಚ್ಚು ಪತ್ರಿಕೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತೀರ್ಪುಗಾರರ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ವಿಭಾಗದ ಪ್ರಾಧ್ಯಾಪಕರು, ಯುಜಿಸಿ, ನವದೆಹಲಿ, ಮತ್ತು ದೇಶದ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಧನ ಸಹಾಯ ಸಂಸ್ಥೆಗಳಾದ ಡಿಎಸ್‍ಟಿ, ಡಿಬಿಟಿ, ಡಿಎಇ-ಬಿಆರ್‍ಎನ್‍ಎಸ್, ಯು.ಜಿ.ಸಿ, ಐಸಿಎಮ್‍ಆರ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಮುಂತಾದ ಸಂಸ್ಥೆಗಳಿಂದ ಸುಮಾರು ನಾಲ್ಕುವರೆ ಕೋಟಿ ರೂಪಾಯಿಗಳ ಧನಸಹಾಯವನ್ನು ತಮ್ಮ ಸಂಶೋಧನ ಕಾರ್ಯಯೋಜನೆಗಳ ರೂಪದಲ್ಲಿ ಪಡೆದಿರುತ್ತಾರೆ. ಈ ಸಂಸ್ಥೆಗಳ ಆರ್ಥಿಕ ನೆರವಿನಿಂದ ಪ್ರಾಧ್ಯಾಪಕರು  ವಿಭಾಗದಲ್ಲಿ ನ್ಯಾನೋಪಾರ್ಟಿಕಲ್ ಪ್ರಿಪರೇಶನ್, ಅನಿಮಲ್ ಸೆಲ್‍ಕಲ್ಚರ್, ಯಾಂಟಿಕ್ಯಾನ್ಸರ್‍ಡ್ರಗ್ ಸ್ಕ್ರೀನಿಂಗ್, ಪ್ಲಾಂಟ್‍ಟಿಶ್ಯೂಕಲ್ಚರ್, ಪ್ಯೂರಿಫಿಕೇಶನ್ ಅಂಡ್ ಕ್ಯಾರಕ್ಟರೈಜೇಶನ್ ಆಫ್ ಪ್ಲಾಂಟ್‍ಡ್ರಗ್ಸ್  ಮುಂತಾದ ವಿಷಯಗಳಲ್ಲಿ ತಮ್ಮ ಸಂಶೋಧನೆಯನ್ನು ಮಾಡಿರುತ್ತಾರೆ ಅಲ್ಲದೇ ಈ ವಿಷಯಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ಸಹ ನೀಡುತ್ತಿದ್ದಾರೆ.

ವಿಜನ್ :

ಜೀವರಸಾಯನಶಾಸ್ತ್ರ ವಿಭಾಗವನ್ನು ಮೌಲ್ಯಾಧಾರಿತ ಹೈಟೆಕ್ ಸಂಶೋಧನಾ ವಿಭಾಗವಾಗಿ ಅಭಿವೃದ್ದಿಪಡಿಸಲು ಒತ್ತು ನೀಡುವುದು.

ಮಿಷನ್:

ಬೋಧನೆ ಮತ್ತು ಸಂಶೋಧನೆಗೆ ಬದ್ಧತೆ ಮತ್ತು ನಮ್ಮ ಅಮೂಲ್ಯವಾದ ವಿದ್ಯಾರ್ಥಿಗಳಿಗೆ ಆಧುನಿಕ ಪ್ರಯೋಗಾಲಯ ಸೌಲಭ್ಯಗಳನ್ನು ಬಳಸಿಕೊಂಡು ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವುದು.

ವಿಭಾಗದ ಚಟುವಟಿಕೆಗಳು:

ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಂತರಿಕ ಬೆಳವಣಿಗೆಗೆ ಸಮಾನವಾದ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ವಿಭಾಗವು ಸ್ಥಾಪನೆಯಾಗಿ 25 ವರ್ಷಗಳಾಗಿದ್ದು ಇದರ ಸಂಭ್ರಮಾಚರಣೆಗಾಗಿ ಅನೇಕ ವಿಷಯ ಪರಿಣಿತರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸಲಾಗಿರುತ್ತದೆ.

ದಿನಾಂಕ/ ಕಾರ್ಯಕ್ರಮ ನಡೆದ ಸ್ಥಳ ಕಾರ್ಯಕ್ರಮ ವಿಷಯ ವಿಷಯ ಪರಿಣಿತರು
ಮಾರ್ಚ್ 12 2018

ದಾ.ವಿ

ಎಸ್.ಎಸ್ ಹಾಲ್

25ನೇ ವರ್ಷದ ಸಂಭ್ರಮಾಚರಣೆ “ ಮೈಕ್ರೋಬಿಯಲ್ ಡಿಗ್ರಡೇಷನ್ ಅಂಡ್ ಟ್ರಾನ್ಸ್‍ಫಾರ್‍ಮೇಷನ್ ಆಫ್ ಆಗ್ರ್ಯಾನಿಕ್ ಪೊಲ್ಯುಟಂಟ್ಸ್ ” ಪ್ರೋ. ಟಿ.ಬಿ ಕರೇಗೌಡರ್ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಕಲಬುರ್ಗಿ.
ಸೆಪ್ಟಂಬರ್ 05 2018

ದಾ.ವಿ

ಎಸ್.ಎಸ್ ಹಾಲ್

¸ಶಿಕ್ಷಕರ ದಿನಾಚರಣೆ ಹಾಗೂ 25ನೇ ವರ್ಷದ ಸಂಭ್ರಮಾಚರಣೆ “ಡಯೆಟರಿ ಪೊಟೆನ್ಷಿಯಲ್ಸ್ ಇನ್ ಹೆಲ್ತ್ ಅಂಡ್ ವೆಲ್‍ನೆಸ್ಸ್” ಡಾ: ಶೈಲಜಾ ಎಂ ಧರ್ಮೇಶ್ವಿಜ್ಞಾನಿ ಮತ್ತು ಪ್ರಾಂಶುಪಾಲರು ಜೀರಸಾಯನಶಾಸ್ತ್ರ ಮತ್ತು ನ್ಯೂಟ್ರಿಷನ್ ಇಲಾಖೆ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ
ಸೆಪ್ಟಂಬರ್ 05 2018

ದಾ.ವಿ

ಎಸ್.ಎಸ್ ಹಾಲ್

ಶಿಕ್ಷಕರ ದಿನಾಚರಣೆ ಹಾಗೂ 25ನೇ ವರ್ಷದ ಸಂಭ್ರಮಾಚರಣೆ “ ಬರ್ಡನ್ ಆಫ್ ಮಲೇರಿಯಾ ಇನ್ ಮಂಗಳೂರು ” ಡಾ: ರಾಜೇಶ್ವರ್‍ಎನ್‍ಆಚಾರ್

ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ.

ಸೆಪ್ಟಂಬರ್ 05 2018

ದಾ.ವಿ

ಎಸ್.ಎಸ್ ಹಾಲ್

ಶಿಕ್ಷಕರ ದಿನಾಚರಣೆ ಹಾಗೂ

25ನೇ ವರ್ಷದ ಸಂಭ್ರಮಾಚರಣೆ

“ಕ್ಯಾಂಥೋಸೊಮಾ ವಿಯೋಟಾಸಿಯಂ ಲೆಕ್ಟಿನ್(XVL): ಎ ನೋವೆಲ್               ಎನ್-ಗ್ಲೈಕಾನ್ ಸ್ಪೆಸಿಫೀಕ್ ಲೆಕ್ಟಿನ್ ವಿಥ್ ಪೊಟೆಂಟ್  ಆಂಟಿಪ್ರೋಲಿ ಫೆರೇಟಿವ್ ಆಕ್ಟಿವಿಟಿ ಟುವರ್ಡಸ್ ಟಿಎನ್‍ಬಿಸಿ” ಪ್ರೋ: ಜಿ. ಜೆ ಸತೀಶ

ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ ಕುವೆಂಪು ವಿಶ್ವವಿದ್ಯಾನಿಲಯ ಶಂಕಘಟ್ಟ.

¸ಸೆಪ್ಟಂಬರ್ 05 2018

ದಾ.ವಿ

ಎಸ್.ಎಸ್ ಹಾಲ್

ಶಿಕ್ಷಕರ ದಿನಾಚರಣೆ ಹಾಗೂ ವಿಭಾಗದ 25ನೇ ವರ್ಷದ ಸಂಭ್ರಮಾಚರಣೆ “ ಇನ್‍ಹ್ಯಾಬಿಕರ್ಸ್ ಆಫ್ ಕ್ಲೀನಿಕಲಿ ಇಂಪಾರ್ಟೆಂಟ್ ಎನ್‍ಝೀಮ್ಸ್ ಆಸ್ ಥೆರಪೇಟಿಕ್ಸ್ ಮಾಲಿಕ್ಯೂಲ್ಸ್ ” ಪ್ರೋ: ಬಿ.ಎಸ್. ವಿಶ್ವನಾಥ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು.
ಸೆಪ್ಟಂಬರ್ 17 2018

ದಾ.ವಿ

ಎಸ್.ಎಸ್ ಹಾಲ್

“25ನೇ ವರ್ಷದ ಸಂಭ್ರಮಾಚರಣೆ”

ವಿಶೇಷ ಉಪನ್ಯಾಸ”

“ಮೈಲ್ ಸ್ಟೋನ್ಸ್ ಇನ್ ಜೀನ್

ಎಕ್ಸ್‍ಪ್ರೇಸ್ಸನ್”

ಪ್ರೋ: ವಿ. ಆರ್‍ದೇವರಾಜ್

ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗ, ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ, ಬೆಂಗಳೂರು

ನವೆಂಬರ್ 29 2018

ದಾ.ವಿ

ಎಸ್.ಎಸ್ ಹಾಲ್

“25ನೇ ವರ್ಷದ ಸಂಭ್ರಮಾಚರಣೆ”

ವಿಶೇಷ ಉಪನ್ಯಾಸ

“ ಹೈ-ಗ್ಲೂಕೋಸ್ ಇಂಡ್ಯೂಸ್ಡ್ ಪ್ಲಾಟೀಲೇಟ್ ಅಪೊಪ್ಲೋಸಿಸ್ ಅಂಡ್ ಅಗ್ರಿಗೇಷನ್: ಮಿಟಿಗೇಷನ್ ಬೈ ಬೆರ್ಬೆರಿನ್, ಎ ಹೈಪೋಗ್ಲೈಸೆಮಿಕ್  ಏಜೆಂಟ್” ಪ್ರೋ: ಗಿರೀಶ್ ಕೆ ಎಸ್

ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಅಧ್ಯಾಪಕರ ವರ್ಗ:

ಕ್ರ. ಸಂ ಹೆಸರು ವಿದ್ಯಾರ್ಹತೆ ಹುದ್ದೆ ವಿಷಯದಲ್ಲಿ ಪರಿಣತಿ

 

01 ಡಾ. ಬಿ. ಮಧುಸೂಧನ್ ಎಂ.ಎಸ್ಸಿ.,

ಪಿಹೆಚ್.ಡಿ.

ಪ್ರಾಧ್ಯಾಪಕರು ಜೀವರಸಾಯನಶಾಸ್ತ್ರ

(ಆಹಾರ ಮತ್ತು ಔಷಧ ನ್ಯಾನೋತಂತ್ರಜ್ಞಾನ)

02 ಡಾ. ಗೋಪಾಲ್ ಎಂ ಅಡವಿರಾವ್ ಎಂ.ಎಸ್ಸಿ.,

ಪಿಹೆಚ್.ಡಿ.

ಪ್ರಾಧ್ಯಾಪಕರು ಜೀವರಸಾಯನಶಾಸ್ತ್ರ

(ಕ್ಯಾನ್ಸರ್ ಬಯಾಲಜಿ, ಮತ್ತು ನರಜೀವಶಾಸ್ತ್ರ)

 

03 ಡಾ. ವಡ್ಲಪೂಡಿ ಕುಮಾರ್ ಎಂ.ಎಸ್ಸಿ.,

ಪಿಹೆಚ್.ಡಿ.

ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಸಸ್ಯ ಜೀವರಸಾಯನಶಾಸ್ತ್ರ ಮತ್ತು ನೈಸರ್ಗಿಕ ಉತ್ಪನ್ನಗಳು
04 ಡಾ: ಸಂತೋಷ್ ಕುಮಾರ್ ಎಂ ಎಂ.ಎಸ್ಸಿ.,

ಪಿಹೆಚ್.ಡಿ.

ಸಹಾಯಕ ಪ್ರಾಧ್ಯಾಪಕರು ಬಯೋಡಿಗ್ರಡೇಷನ್, ಬಯೋಟ್ರಾನ್ಸ್‍ಫರ್‍ಮೇಷನ್ ಮತ್ತು ಬಯೋಕ್ಯಾಟಲೈಸಿಸ್
05 ಅತಿಥಿ ಉಪನ್ಯಾಸಕರುಗಳ ಸಂಖ್ಯೆ : 05

 

 ವಿಭಾಗದಲಿ ್ಲ ಒತ್ತು ಕೊಟ್ಟಿರುವ ಸಂಶೋಧನಾ ಕ್ಷೇತ್ರಗಳು:

 • ಕ್ಯಾನ್ಸರ್ ಬಯಾಲಜಿ
 • ನ್ಯೂರೋ ಬಯಾಲಜಿ
 • ಆಹಾರ ಮತ್ತು ಔಷಧ ನ್ಯಾನೋತಂತ್ರಜ್ಞಾನ
 • ಸಸ್ಯ ಜೀವರಸಾಯನಶಾಸ್ತ್ರ ಮತ್ತು ನೈಸರ್ಗಿಕ ಉತ್ಪನ್ನಗಳು
 • ಬಯೋಡಿಗ್ರಡೇಷನ್, ಬಯೋಟ್ರಾನ್ಸ್‍ಫರ್‍ಮೇಷನ್ ಮತ್ತು ಬಯೋಕ್ಯಾಟಲೈಸಿಸ್

ವಿಭಾಗದ ಪ್ರಮುಖ ಸೌಲಭ್ಯಗಳು:

ಅನಿಮಲ್ ಸೆಲ್ ಕಲ್ಚರ್ ಪ್ರಯೋಗಾಲಯ, ಹಸಿರುಮನೆ, ಇನ್ಕ್ಯುಬೇಟರ್ಸ್, ಅಲ್ಟ್ರಾ ಫ್ರೀಜರ್‍ಗಳು (-200 ಅ ಮತ್ತು - 860 ಅ), ಲೈಯೋಫಿಲಿಜರ್ಸ್, ಫ್ಲೋರೆಸನ್ಸ್ ಮೈಕ್ರೋಸ್ಕೋಪ್, ಅಲ್ಟ್ರಾ ಸೋನಿಕೇಟರ್, ಹೈ-ಸ್ಪೀಡ್ ಸೆಂಟ್ರಿಪ್ಯೂಜ್, ಪ್ಲೋರೆಸೆನ್ಸ್ ಸ್ಪೆಕ್ಟ್ರಾಫೋಟೊಮೀಟರ್, ELISAರೀಡರ್ಸ್, UV-Visible ಸ್ಪೆಕ್ಟ್ರಾಫೋಟೋಮೀಟರ್, ಆರ್ಬಿಟಲ್ ಶೇಕಿಂಗ್‍ಇನ್ಕ್ಯುಬೇಟರ್ಸ್, HPLC, RT-PCR, PCR ಮೆಷಿನ್ಸ್, ಜೆಲ್‍ಡಾಕ್ಯುಮೇಂಟೇಷನ್ ಸಿಸ್ಟಮ್ಸ್, ಫ್ರ್ಯಾಕ್ಷನ್‍ಕಲೆಕ್ಟರ್.

ಸಂಶೋಧನೆ:

ವಿಭಾಗದ ಬೋಧನಾ ಸದಸ್ಯರು ತಮ್ಮ ಸಂಶೋಧನಾ ಕೊಡುಗೆಗಳನ್ನು ಗುರುತಿಸಿ ಹಣಕಾಸು ಸಂಸ್ಥೆಗಳಿಂದ ಧನಸಹಾಯವನ್ನು ಪಡೆದಿರುತ್ತಾರೆ. ಅವರು ಡಿಬಿಟಿ, ಡಿಎಸ್.ಟಿ, ಡಿಎಈ-ಬಿಆರ್‍ಎನ್‍ಎಸ್, ಐಸಿಎಂಆರ್, ಯುಜಿಸಿ ಮತ್ತು ಪೋಸ್ಟ್-ಡಾಕ್ಟರಲ್‍ಡಿಸರ್ಚ್ ಫೆಲೋಶಿಪ್‍ಗಳನ್ನು ಕೂಡಾ ಒಳಗೊಂಡಿರುತ್ತಾರೆ. ಜೀವರಸಾಯನಶಾಸ್ತ್ರ ವಿಭಾಗದಲ್ಲಿ 34 ಪಿಹೆಚ್. ಡಿ., ಮತ್ತು 11 ಎಂ.ಫಿಲ್ ಅಭ್ಯರ್ಥಿಗಳು ಯಶಸ್ವಿಯಾಗಿ ಮತ್ತು 10 ಅಭ್ಯರ್ಥಿಗಳು ಡಾಕ್ಟರೇಟ್ ಪದವಿಗೆ ನೋಂದಾಯಿಸಿದ್ದಾರೆ.

ವಿದ್ಯಾರ್ಥಿ-ಶಿಕ್ಷಕ ಸಂವಹನ:

ತರಗತಿ ಬೋಧನೆಯ ಹೊರತಾಗಿ, ಗುಂಪು ಚರ್ಚೆ, ಸೆಮಿನಾರ್‍ಗಳು ಮತ್ತು ಪ್ರಾಜೆಕ್ಟ್ ಕೆಲಸದ ಮೂಲಕ ವಿದ್ಯಾರ್ಥಿ-ಬೋಧನಾ ವಿಭಾಗದ ಸಂವಹನಕ್ಕಾಗಿ ಸಾಕಷ್ಟು ಅವಕಾಶವಿರುತ್ತದೆ. ಸಾಂಸ್ಕøತಿಕ ಚಟುವಟಿಕೆಗಳು ಮತ್ತು ವಾರ್ಷಿಕ ಶೈಕ್ಷಣಿಕ ಪ್ರವಾಸದ ಮೂಲಕ ಬೋಧನೆಗೆ ಸಂಬಂಧಪಟ್ಟ ವಿಷಯಗಳ ಸಂವಹಗಳು ಇರುತ್ತವೆ.

ಕೋರ್ಸ್ ರಚನೆ:

Sl.No I Semeter Sl.

No

II Semester
1 Biomolecules 1 Enzymology
2 Biochemical Techniques 2 Bioenergetics and Intermediary Metabolism
3 Cell Biology, Microbiology and Human Physiology 3 Clinical Biochemistry and Research Methodology
4 Biostatistics and Computer Application 4 Molecular Genetics and Developmental Biology
Practical Papers   Practical Papers
5 Biomolecules 5 Enzymology
6 Biochemical Techniques 6 Bioenergetics and Intermediary Metabolism
7 Cell Biology, Microbiology and Human Physiology 7 Clinical Biochemistry and Research Methodology
8 Biostatistics  and Computer Application 8 Molecular Genetics and Developmental Biology

 

Sl.

No

III Semeter Sl.

No

IV Semester
1 Molecular Biology 1 Molecular Immunology
2 Membrane Biochemistry and Bioinformatics 2 Genetic Engineering and Industrial Biotechnology
3 Molecular Endocrinology 3 Cell Signaling and Cell Communication
4 Plant Biochemistry
5 Clinical Biochemistry (Interdisciplinary/Elective Paper)
Practical Papers   Practical Papers
6 Molecular Biology 4 Molecular Immunology
7 Membrane Biochemistry and Bioinformatics 5 Genetic Engineering and Industrial Biotechnology
8 Molecular Endocrinology 6 Cell Signaling and Cell Communication
9 Plant Biochemistry 7 Project work / Dissertation

 

ವಿಭಾಗಕಾರ್ಯದ ಯೋಜನೆ:

 • ಉತ್ತಮ ಸಹಯೋಗ / ವಿನಿಮಯ ಕಾರ್ಯಕ್ರಮಗಳನ್ನು ಸ್ಥಾಪಿಸುವುದು.
 • ಬೋಧನೆ ಮತ್ತು ಸಂಶೋಧನೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು.
 • ಬೋಧನೆ ಮತ್ತು ಸಂಶೋಧನೆಯಲ್ಲಿ ಇಲಾಖೆಯನ್ನು ಬಲಪಡಿಸಲು

ವಿಭಾಗದ ಪ್ರಮುಖ ಅಂಶಗಳು:

 • ಉತ್ತಮ ಸಂಖ್ಯೆಯ ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಗೊಂಡಿವೆ.
 • ವಿಭಾಗದ ಅಧ್ಯಾಪಕರುಗಳಿಗೆ ಹೊಸ ಸಂಶೋಧನಾ ಯೋಜನೆಗಳು ಮಂಜೂರಾಗಿರುತ್ತದೆ.
 • ಉತ್ತಮವಾದ ಪ್ರಯೋಗಾಲಯಗಳು ಮತ್ತು ಉಪಕರಣಗಳು ಲಭ್ಯವಿರುತ್ತದೆ.